ಅಥಣಿ: ತಾಂವಶಿ ಗ್ರಾಮದಲ್ಲಿ ಸಾಲಬಾದೆ ತಾಳಲಾರದೆ ಯುವ ರೈತ ಆತ್ಮಹತ್ಯೆಗೆ ಶರಣು
Athni, Belagavi | Nov 28, 2025 ತಾಂವಶಿ ಗ್ರಾಮದಲ್ಲಿ ಸಾಲಬಾದೆ ತಾಳಲಾರದೆ ಯುವ ರೈತ ಆತ್ಮಹತ್ಯೆಗೆ ಶರಣು. ತಾಂವಶಿ ಗ್ರಾಮದ ಯುವ ರೈತ ಕಾಂತೇಶ ಪಾಂಡು ಕುಂಬಾರ (35) ಯುವ ರೈತ ತಾಂವಶಿ ಗ್ರಾಮದ ಹೊರವಯದಲ್ಲಿ ಕುಂಬಾರ ತೋಟದ ಗಣೇಶ ಗುಡಿಯ ಬಳಿ ಶುಕ್ರವಾರ ಬೇವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಕಾಂತೇಶ ಸುಮಾರು ದಿನಗಳಿಂದ ಸಾಲಬಾದೆ ಯಿಂದ ಮಾನಸಿಕವಾಗಿ ನೊಂದಿದ್ದರು. ರಾಷ್ಟ್ರೀಕೃತ ಬ್ಯಾಂಕ, ಫೈನಾನ್ಸ್, ಸಹಕಾರಿ ಬ್ಯಾಂಕ, ಸಂಘ ಸಂಸ್ಥೆ ಬ್ಯಾಂಕುಗಳು ಸೇರಿದಂತೆ ಒಟ್ಟು ಹದಿನೈದು ಲಕ್ಷ ಸಾಲದ ಬಗ್ಗೆ ಸಂಬಧಿಕರು ಮಾಹಿತಿ ನೀಡಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ