ಬೆಂಗಳೂರಿನಲ್ಲಿ ಪರಿಷತ್ ವಿಪಕ್ಷ ನಾಯಕ ಛಲವಾಧಿ ನಾರಾಯಣಸ್ವಾಮಿ ಅವರು ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಮಲ್ಲೇಶ್ವರಂ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಷ್ಟು ದಿನಗಳ ಕಾಲ ರಾಜ್ಯದಲ್ಲಿ ಕಾಂಗ್ರೆಸ್ ನಲ್ಲಿ ನಡೆದ ಗೊಂದಲಕ್ಕೆ ಎಐಸಿಸಿ ಅಧ್ಯಕ್ಷರೇ ಬೆಂಗಳೂರಿಗೆ ಬಂದು, ಇದು ಪರಿಹಾರ ಮಾಡಲು ಸಾಧ್ಯವಿಲ್ಲ ಅಂತ ಹೇಳಿದ್ರು. ನನಗೆ ಬೇಜಾರು ಆಗಿದೆ, ಎಲ್ಲವೂ ಹೈಕಮಾಂಡ್ ನೋಡಿಕೊಳ್ಳಲಿದೆ ಅಂತ ಮಲ್ಲಿಕಾರ್ಜುನ ಖರ್ಗೆ ದೆಹಲಿಗೆ ಹೊರಟು ಹೋದ್ರು, ಇದರಿಂದ ಜನರಿಗೆ ಗೊಂದಲ ಆಗಿತ್ತು. ಕಾಂಗ್ರೆಸ್ ನಲ್ಲಿ ಯಾರು ಹೈಕಮಾಂಡ್ ಅಂತ ಗೊಂದಲ ಇತ್ತು. ಯಾರು ಹೈಕಮಾಂಡ್ ಅಂದ್ರೆ..? ಎಐಸಿಸಿ ಜನರಲ್ ಸಕ್ರೆಟ್ರಿ ವೇಣುಗೋಪಾಲ ಇವರಿಗೆ ಹೈಕಮಾಂಡ್ ಆಗಿದ್ಧಾರೆ ಎಂದು ಆರೋಪಿಸಿದರು.