DAY-02 ತುಮಕೂರು ದಸರಾ ಉತ್ಸವ-2026: ಎರಡನೇ ದಿನ ಬ್ರಹ್ಮಚಾರಿಣಿ ದೇವಿಯ ಪೂಜೆ ನೆರವೇರಿಕೆ
ತುಮಕೂರು ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿರುವ ತುಮಕೂರು ದಸರಾ ಉತ್ಸವ-2026ರ ಎರಡನೇ ದಿನವಾದ ಅಕ್ಟೋಬರ್ 12ರಂದು ನವರಾತ್ರಿಯ ಎರಡನೇ ದಿನದ ಅಧಿದೇವತೆಯಾದ ಶ್ರೀ ಬ್ರಹ್ಮಚಾರಿಣಿ ದೇವಿಯ ಪೂಜೆಯನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಕ್ತಿಭಾವದಿಂದ ನೆರವೇರಿಸಲಾಯಿತು.
ನವರಾತ್ರಿ ಉತ್ಸವದಲ್ಲಿ ನವದುರ್ಗೆಯ ಎರಡನೇ ರೂಪವಾದ ಬ್ರಹ್ಮಚಾರಿಣಿ ದೇವಿಗೆ ವಿಶೇಷ ಮಹತ್ವವಿದೆ. ತಪಸ್ಸು, ತಾಳ್ಮೆ, ಶಾಂತಿ ಹಾಗೂ ಜ್ಞಾನದ ಪ್ರತೀಕವಾಗಿರುವ ದೇವಿಯನ್ನು ಪೂಜಿಸುವುದರಿಂದ ಸುಖ, ಶಾಂತಿ, ಸಮೃದ್ಧಿ ಹಾಗೂ ಸಕಲ ಮಂಗಳಗಳು ಲಭಿಸಲಿ ಎಂದು ಭಕ್ತರು ಪ್ರಾರ್ಥಿಸಿದರು.
ತುಮಕೂರು ದಸರಾ ಉತ್ಸವದ ಅಂಗವಾಗಿ ಆಯೋಜಿಸಲಾದ ಧಾರ್ಮಿಕ ಕಾರ್ಯಕ್ರಮವು ನಾಡಿನ ಸಾಂಸ್ಕೃತಿಕ ವೈಭವ, ಧಾರ್ಮಿಕ ನಂಬಿಕೆ ಹಾಗೂ ಆಧ್ಯಾತ್ಮಿಕ ಪರಂಪರೆಯನ್ನು ಪ್ರತಿಬಿಂಬಿಸಿತು. ನವರಾತ್ರಿಯ ಸಂಭ್ರಮದೊಂದಿಗೆ ದೇವಿಯ ಆರಾಧನೆ ಉತ್ಸವಕ್ಕೆ ಭಕ್ತಿಯ ವಾತಾವರಣವನ್ನು ಕಲ್ಪಿಸಿತು.
ಈ ಸಂದರ್ಭದಲ್ಲಿ ಧಾರ್ಮಿಕ ಮುಖಂಡರು, ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದು, ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
#tumakuru #dasara #nammatumakuru #dctumakuru
Yadgir, Yadgir | Oct 12, 2026