ಬೆಳಗಾವಿ: ಬೆಳಗಾವಿಯ ಕಾಕತಿಯಲ್ಲಿ ಕಿತ್ತೂರು ಚನ್ನಮ್ಮ ಉತ್ಸವಕ್ಕೆ ಅದ್ಧೂರಿ ಚಾಲನೆ
ಬೆಳಗಾವಿಯ ಕಾಕತಿಯಲ್ಲಿ ಕಿತ್ತೂರು ಚನ್ನಮ್ಮ ಉತ್ಸವಕ್ಕೆ ಸಚಿವ ಸತೀಶ್ ಜಾರಕಿಹೊಳಿ ಚಾಲನೆ ನೀಡಿದರು. ಕುಂಭಮೇಳ ಹಾಗೂ ಜಾನಪದ ಕಲಾ ತಂಡಗಳ ಮೆರವಣಿಗೆಯೊಂದಿಗೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಈ ವೇಳೆ ಶಾಸಕ ಆಸೀಫ್ ಸೇಠ್ ಹಾಗೂ ಪೊಲೀಸ್ ಆಯುಕ್ತ ಪ್ರಕಾಶ ನಿಕಂ ಉಪಸ್ಥಿತರಿದ್ದರು.