ಉಡುಪಿ: ಅ. 24ರಂದು ಪರಿವಾರ್ ಕ್ರೆಡಿಟ್ ಸೊಸೈಟಿಯ ನೂತನ ಕಚೇರಿ ಉದ್ಘಾಟನೆ
Udupi, Udupi | Oct 22, 2026 ಉಡುಪಿಯ ಪರಿವಾರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ತನ್ನ ರಜತ ಮಹೋತ್ಸವದ ಅಂಗವಾಗಿ ಅಕ್ಟೋಬರ್ 24ರಂದು ಸಂಜೆ 4.30ಕ್ಕೆ ಜೋಡುಕಟ್ಟೆಯ ಆಶ್ರಯ ಟವರ್ಸ್ನಲ್ಲಿ ನೂತನ ಪ್ರಧಾನ ಕಚೇರಿಯನ್ನು ಉದ್ಘಾಟಿಸಲಿದೆ. 25 ವರ್ಷಗಳ ಪಯಣ ಪೂರ್ಣಗೊಳಿಸಿರುವ ಈ ಸಂಸ್ಥೆ, ಪ್ರಸ್ತುತ 125 ಕೋಟಿ ವಾರ್ಷಿಕ ವಹಿವಾಟು ನಡೆಸುತ್ತಿದೆ.