ಬೆಳಗಾವಿ: ಏಷ್ಯನ್ ಗೇಮ್ಸ್ ಈಜು ಸ್ಪರ್ಧೆ: ಕಂಚು ಗೆದ್ದು ಸಂಚಲನ ಸೃಷ್ಟಿಸಿದ ಬೆಳಗಾವಿಯ ಸ್ವಾತಿಕ್ ಪಾಟೀಲ್
ಏಷ್ಯನ್ ಗೇಮ್ಸ್ನ 100 ಮೀಟರ್ ಈಜು ಸ್ಪರ್ಧೆಯಲ್ಲಿ ಬೆಳಗಾವಿ ಮೂಲದ ಸ್ವಾತಿಕ್ ಪಾಟೀಲ್ ಕಂಚಿನ ಪದಕ ಗೆದ್ದಿದ್ದಾರೆ. ಸಾಫ್ಟ್ವೇರ್ ಉದ್ಯೋಗಿಯಾಗಿರುವ ಸ್ವಾತಿಕ್, 1 ನಿಮಿಷ 13.77 ಸೆಕೆಂಡ್ನಲ್ಲಿ ಗುರಿ ತಲುಪಿ ಈ ಸಾಧನೆ ಮಾಡಿದ್ದಾರೆ. ಇವರ ಸಾಧನೆಗೆ ಬೆಳಗಾವಿ ಜನತೆ ಅಭಿನಂದನೆ ಸಲ್ಲಿಸಿದ್ದಾರೆ.