ಶಿವಮೊಗ್ಗ: ಹೊಸನಗರದ ಕಾರಕ್ಕಿ ಗ್ರಾಮದಲ್ಲಿ ಮನೆ ಮೇಲೆ ತೆಂಗಿನ ಮರ ಬಿದ್ದು ಅಪಾರ ಹಾನಿ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಖಾರಕ್ಕೆ ಗ್ರಾಮದಲ್ಲಿ ಮಳೆ ಗಾಳಿಯಿಂದಾಗಿ ಮನೆ ಮೇಲೆ ತಂಗಿನ ಮರ ಬಿದ್ದು ಅಪಾರ ಪ್ರಮಾಣದ ಹಾನಿ ಉಂಟಾಗಿರುವ ಘಟನೆ ಮಂಗಳವಾರ ಜರುಗಿದೆ ಕಾರಕ್ಕೆ ಗ್ರಾಮದ ಅರಗೋಡಿ ನಾಗರಾಜ್ ಎಂಬುವವರ ಮನೆ ಮೇಲೆ ದೊಡ್ಡ ತೆಂಗಿನ ಮರ ಬಿದ್ದ ಪರಿಣಾಮ ಮನೆಯನ್ನು ಎರಡು ಭಾಗ ಮಾಡಿದಂತೆ ಹಾನಿಯಾಗಿದೆ ಮನೆಯ ಹಂಚುಗಳು ಸಂಪೂರ್ಣ ಹಾಳಾಗಿದ್ದು, ವಿಷಯ ತಿಳಿದ ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಪರಿಶೀಲನೆ ನಡೆಸಿದ್ದಾರೆ.