ಶಿವಮೊಗ್ಗ: ಸೊರಬದಲ್ಲಿ ಜೇನು ಕೃಷಿ ಮತ್ತು ಜೈವಿಕ ಗೋಪುರದ ಬಳಕೆಯ ಮಹತ್ವ ಕುರಿತು ತರಬೇತಿ ಕಾರ್ಯಾಗಾರ
ಸೊರಬ ತಾಲೂಕಿನ ತಲಕಾಲಕೊಪ್ಪದಲ್ಲಿ ಮಂಗಳವಾರ ಜಿಲ್ಲಾ ತೋಟಗಾರಿಕೆ ಬೆಳಗಾರರ ಉತ್ಪನ್ನ ಮಾರಾಟ ಮತ್ತು ಸಂಸ್ಕಾರ ಸಹಕಾರ ಸಂಘ ಮತ್ತು ತೋಟಗಾರಿಕಾ ಇಲಾಖೆ ಹಾಗೂ ಮಧುಬನ ಜೇನು ಸಂರಕ್ಷಣ ಮತ್ತು ಮಾರಾಟ ಸಹಕಾರ ಸಂಘ ನಿಸರಾಣಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜೇನು ಕೃಷಿ ಮತ್ತು ಜೈವಿಕ ಗೋಪುರದ ಬಳಕೆಯ ಮಹತ್ವ ಕುರಿತು ತರಬೇತಿ ಕಾರ್ಯಗಾರವನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಮಂಜುನಾಥ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ರೈತರು ಪ್ರಸ್ತುತ ಬೆಳೆಗಳಿಗೆ ಅಧಿಕಾರಗಳನ್ನು ಬಳಸುತ್ತಿರುವುದರಿಂದ ನೈಸರ್ಗಿಕವಾಗಿ ದೊರೆಯುವ ಜೇನು, ವಿನಾಶದತ್ತ ಸಾಗಿದೆ ಎಂದರು.