ಶಿವಮೊಗ್ಗ: ಅಮೀರ್ ಜಾನ್ ಕಾಲೊನಿಯಲ್ಲಿ ಗಾಂಜಾ ಮಾರುತ್ತಿದ್ದ ವ್ಯಕ್ತಿಯ ಬಂಧನ
ಭದ್ರಾವತಿಯ ಅಮೀರ್ ಜಾನ್ ಕಾಲೋನಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ. ಭದ್ರಾವತಿಯ ಹಳೆ ನಗರ ಪೊಲೀಸ್ ಅಧಿಕಾರಿಗಳಿಗೆ ಬಂದಂತಹ ಖಚಿತ ಮಾಹಿತಿ ಮೇರೆಗೆ ಪೊಲೀಸರು ಅಮೀರ್ ಜಾನ್ ಕಾಲೋನಿಯಲ್ಲಿ ಪರಿಶೀಲಿಸಿದ್ದಾರೆ. ಈ ವೇಳೆ ಭದ್ರಾವತಿಯ ಅನ್ವರ್ ಕಾಲೋನಿಯ ಅಬೀದ್(35) ಎಂಬ ವ್ಯಕ್ತಿ ಗಾಂಜಾ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ.ಕೂಡಲೇ ಆತನನ್ನು ಪೊಲೀಸರು ಬಂಧಿಸಿದ್ದು, ಬಂಧಿತ ಆರೋಪಿಯ ಬಳಿ ಇದ್ದಂತಹ 5000 ರೂ. ಮೌಲ್ಯದ 322 ಗ್ರಾಂ ತೂಕದ ಒಣಗಾಂಜಾ ಹಾಗೂ ಗಾಂಜಾ ಮಾರಾಟ ಮಾಡಿ ಗಳಿಸಿದ್ದ ಸಾವಿರ ರೂಪಾಯಿ ನಗದು ಹಣವನ್ನ ಪೊಲೀಸರು ವಶಕ್ಕೆ ಪಡೆದಿರುವಾಗ ಘಟನೆ ಮಂಗಳವಾರ ಜರುಗಿದೆ.ಈ ಸಂಬಂಧ ಭದ್ರಾವತಿಯ ಹಳೆಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ