ಶಿವಮೊಗ್ಗ: ಹಳಗುಂದ ಗ್ರಾಮದ ಬಳಿ ಗಾಳಿಗೆ ಬಿದ್ದ ಬೃಹತ್ ಮರ, ವಾಹನ ಸವಾರರ ಪರದಾಟ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹಳಗುಂದ ಗ್ರಾಮದಲ್ಲಿ ಗಾಳಿ ಮಳೆಯಿಂದ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಮರ ವಾಹನ ಸವಾರರ ಪರದಾಟ. ಹಳಗುಂದ ಗ್ರಾಮದಲ್ಲಿ ಗಾಳಿ ಮಳೆಯಿಂದಾಗಿ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ತೀರ್ಥಹಳ್ಳಿ, ಮಾಸ್ತಿ ಕಟ್ಟೆ ,ಕುಂದಾಪುರ ರಸ್ತೆ ಕೆಲಕಾಲ ಸ್ಥಗಿತಗೊಂಡಿದೆ. ಇನ್ನ ಮಂಗಳೂರು,ಉಡುಪಿ, ಕುಂದಾಪುರ,ಮಣಿಪಾಲ್ ತೆರಳಲು ವಾಹನ ಸವಾರರು ಪರದಾಡುವಂತಾಗಿದೆ. ಗಂಟೆಗಟ್ಟಲೆ ನಿಂತಲ್ಲೇ ನಿಂತ ವಾಹನಗಳು ಅರಣ್ಯ ಅಧಿಕಾರಿಗಳಿಂದ ಮರ ತೆರವು ಕಾರ್ಯಾಚರಣೆ ನಡೆಯುತ್ತಿದೆ.