ಗಂಗಾವತಿ: ಅಂಜನಾದ್ರಿಯ ಮೂಲ ಅರ್ಚಕರಿಗೆ ಇದೆಂತಾ ಅನ್ಯಾಯ, ಸುಪ್ರಿಂ ಕೋರ್ಟ ಆದೇಶಕ್ಕೂ ಕಿಮ್ಮತ್ತು ಕೊಡದ ಡಿಸಿ
ತಾಲೂಕಿನ ಅಂಜನಾದ್ರಿಯ ಆಂಜನೇಯನ ದೇವಸ್ಥಾನದ ಮೂಲ ಅರ್ಚಕ ವಿದ್ಯಾದಾಸ್ ಬಾಬಾ ಅವರು ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಹಾಗೂ ದೇವಸ್ಥಾನದ ಆಡಳಿತಾಧಿಕಾರಿ ಪ್ರಕಾಶ ರಾವ್ ವಿರುದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನ್ಯಾಯಾಂಗ ನಿದನೆ ದೂರು ದಾಖಲಿಸಿದ್ದಾರೆ. ಸುಪ್ರಿಂ ಕೋರ್ಟ ನಿಂದ ಆದೇಶ ತಂದು ಪೂಜೆ ಮಾಡ್ತಿರೋ ವಿದ್ಯಾದಾಸ್ ಬಾಬಾ ಅವರಿಗೆ ಆಡಳಿತಾಧಿರಿ ಸುಖಾ ಸುಮ್ಮನೆ ಕಿರುಕುಳ ನೀಡ್ತಾರೆ ಎಂದು, ಮತ್ತು ರವಿವಾರ ರಾತ್ರಿ ದೇವಸ್ಥಾನಕ್ಕೆ ಬೇಟಿ ನೀಡಿದ ಜಿಲ್ಲಾಧಿಕಾರಿ ದಾರ್ಮಿಕ ದತ್ತಿ ಇಲಾಖೆಯ ಅರ್ಚಕರನ್ನ ಕರೆಸಿ ಪೂಜೆ ಮಾಡಿಸಿದ್ದಾರೆ ಎಂದು ಮೂಲ ಅರ್ಚಕ ವಿದ್ಯಾದಾಸ್ ಬಾಬಾ ಅವರು ದೂರು ನೀಡಿದ್ದಾರೆ...