ಬೇಲೂರು: ಬೇಲೂರಿನಲ್ಲಿ ಬಿಸಿಲಿನ ತಾಪಕ್ಕೆ ಬ್ರೇಕ್: ಒಂದು ಗಂಟೆ ಸುರಿದ ಮಳೆಯಿಂದ ತಂಪಾದ ವಾತಾವರಣ
Belur, Hassan | Sep 30, 2026 ಬೇಲೂರು ಪಟ್ಟಣದಲ್ಲಿ ದೀರ್ಘಕಾಲದ ಬಿಸಿಲಿನ ಬಳಿಕ ಬುಧವಾರ ಮಧ್ಯಾಹ್ನ ಒಂದು ಗಂಟೆ ಕಾಲ ಮಳೆ ಸುರಿದಿದೆ. ಇದರಿಂದ ಜನತೆ ಬಿಸಿಲಿನ ಬೇಗೆಯಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ವಾತಾವರಣ ತಂಪಾಗಿದೆ. ಮುಂಗಾರು ಕೈಕೊಟ್ಟಿದ್ದರಿಂದ ಕಂಗೆಟ್ಟಿದ್ದ ಜನರಲ್ಲಿ ಈ ಮಳೆ ಹೊಸ ನಿರೀಕ್ಷೆ ಮೂಡಿಸಿದೆ.