ತೀರ್ಥಹಳ್ಳಿ: ತುಂಗಾ ನದಿಯಲ್ಲಿ ಮೂವರು ಬಾಲಕರ ಸಾವು, ಇಬ್ಬರ ಶವ ಪತ್ತೆ, ಓರ್ವನ ಶವಕ್ಕೆ ಶೋಧ
ರಂಜಾನ್ ಉಪವಾಸ ಮುಗಿಸಿ ಈಜಲು ಹೋಗಿದ್ದ ಮೂವರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ತೀರ್ಥಹಳ್ಳಿ ರಾಮ ಮಂಟಪ ಪಕ್ಕ ತುಂಗಾ ನದಿ ಪಾಲಾದ ಘಟನೆ ಸೋಮವಾರ ಸಂಜೆ ನಡೆದಿದೆ. ಇಬ್ಬರು ಬಾಲಕರ ಶವ ಪತ್ತೆಯಾಗಿದೆ. ಈಗಾಗಲೇ ಜನ ತುಂಗಾ ತೀರದಲ್ಲಿ ಜಮಾವಣೆಗೊಂಡಿದ್ದು, ಅಗ್ನಿ ಶಾಮಕ ದಳ ಮತ್ತು ಪೊಲೀಸರು ಸ್ಥಳದಲ್ಲಿ ಇದ್ದಾರೆ. ರಫಿಕ್, ಇಯನ್, ಅರ್ಫದ್ ಮೃತ ಬಾಲಕರು. ರಫಿಕ್, ಇಯಾನ್ ಮೃತ ದೇಹ ಸಿಕ್ಕಿದ್ದು ಇನ್ನೊಬ್ಬನಿಗಾಗಿ ಹುಡುಕಾಟ ನಡೆದಿದೆ. ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.