ಭಟ್ಕಳ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಬಂದ ದನ, ವಾಹನಗಳ ಸರಣಿ ಅಪಘಾತ
ಭಟ್ಕಳ: ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ದನವೊಂದು ಆಕಸ್ಮಿಕವಾಗಿ ಅಡ್ಡ ಬಂದಿದ್ದರಿಂದ ನಾಲ್ಕು ವಾಹನಗಳು ಒಂದರ ಹಿಂದೆ ಒಂದು ಡಿಕ್ಕಿ ಹೊಡೆದು, ರಸ್ತೆ ಬದಿಯ ಇಳಿಜಾರಿನಲ್ಲಿ ಉರುಳಿದ ಘಟನೆ ಸಂಭವಿಸಿದೆ. ಅದೃಷ್ಟ ವಶಾತ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಕೇರಳದಿಂದ ಮಹಾರಾಷ್ಟ್ರದ ಕಡೆಗೆ ತೆರಳುತ್ತಿದ್ದ ಕಾರಿನ ಮುಂದೆ ಏಕಾಏಕಿ ದನ ಅಡ್ಡ ಬಂದಿದೆ. ಅಪಘಾತ ತಪ್ಪಿಸಲು ಚಾಲಕ ವಾಹನ ತಿರುಗಿಸಿದ ಪರಿಣಾಮ ನಿಯಂತ್ರಣ ತಪ್ಪಿ ಕಾರು ಮೊದಲು ಸರಕು ಸಾಗಣೆ ಆಟೋ ರಿಕ್ಷಾಗೆ ಡಿಕ್ಕಿಯಾಯಿತು. ನಂತರ ಅಲ್ಲಿದ್ದ ಬೊಲೆರೊ ಪಿಕ್‌ಅಪ್ ವಾಹನ ಹಾಗೂ ಪಿಕ್ ಅಪ್ ವಾಹನಕ್ಕೆ ಡಿಕ್ಕಿಯಾಗಿ ಸರಣಿ ಅಪಘಾತ ಸಂಭವಿಸಿದೆ.