ಗುಂಡ್ಲುಪೇಟೆ: ಗುಂಡ್ಲುಪೇಟೆಯಲ್ಲಿ ಟೀ ಅಂಗಡಿ ಬೀಗ ಹೊಡೆದು ಒಳ ನುಗ್ಗಿದ ಕಳ್ಳರು
ಗುಂಡ್ಲುಪೇಟೆ, ಪಟ್ಟಣದ ಟೌನ್ ಮುಖ್ಯರಸ್ತೆಯಲ್ಲಿ ಕಿಡಿಗೇಡಿಗಳು ಬೀಗ ಒಡೆದು ಟೀ ಅಂಗಡಿಗೆ ನುಗ್ಗಿರುವ ಘಟನೆ ನಡೆದಿದೆ. ಗ್ರೀನ್ ವ್ಯಾಲಿ ಹೋಟೆಲ್ ಮುಂಭಾಗದಲ್ಲಿರುವ ಪುಷ್ಪ ಎಂಬವರಿಗೆ ಸೇರಿದ ಟೀ ಅಂಗಡಿಗೆ ತಡರಾತ್ರಿ ಕಳ್ಳರು ಬೀಗ ಮುರಿದು ಒಳ ಪ್ರವೇಶಿಸಿದ್ದಾರೆ. ಬೆಳಿಗ್ಗೆ 7ರಲ್ಲಿಅಂಗಡಿಯ ಬಾಗಿಲು ತೆಗೆಯಲು ಆಗಮಿಸಿದ ಪುಷ್ಪ ಅವರಿಗೆ ಈ ಕಳವು ಘಟನೆ ಬೆಳಕಿಗೆ ಬಂದಿದೆ. ಅಂಗಡಿಯಲ್ಲಿದ್ದ ಸಿಗರೇಟ್ ಸೇರಿದಂತೆ ಕೆಲವೊಂದು ವಸ್ತುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ ಎನ್ನಲಾಗಿದೆ. ಘಟನೆಯ ಮಾಹಿತಿ ಲಭಿಸಿದ ನಂತರ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.