ಬೆಳಗಾವಿ: ಬೆಳಗಾವಿಯ ಬೆಂಡಿಗೇರಿಯಲ್ಲಿ ನಡೆದ 'ಪ್ರಜಾಸೇವೆ ಆಂದೋಲನ' ಕಾರ್ಯಕ್ರಮ
ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಆಡಳಿತದ ಸಹಯೋಗದಲ್ಲಿ ಬೆಂಡಿಗೇರಿ ಗ್ರಾಮದಲ್ಲಿ 'ಪ್ರಜಾಸೇವೆ ಆಂದೋಲನ' ಕಾರ್ಯಕ್ರಮ ಆಯೋಜಿಸಲಾಗಿತ್ತು. ಸರ್ಕಾರದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಉದ್ದೇಶದಿಂದ ನಡೆದ ಈ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.