ಶಿವಮೊಗ್ಗ: ಸಕ್ರೆಬೈಲಿನ ಬಳಿ ಕಾರು-ಕೆಎಸ್ಆರ್‌ಟಿಸಿ ಬಸ್ ಮಧ್ಯೆ ಡಿಕ್ಕಿ, ಕಾರು ಸಂಪೂರ್ಣ ಜಖಂ
ಶಿವಮೊಗ್ಗದ ಸಕ್ರೆಬೈಲಿನ ಬಳಿ ಕೆಎಸ್ಆರ್ ಟಿ ಸಿ ಬಸ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಉಂಟಾಗಿದ್ದು ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಮಂಗಳವಾರ ಆಗುಂಬೆಯಿಂದ ಬೆಂಗಳೂರಿಗೆ ಹೊರಟ ಕೆಎಸ್ ಆರ್ ಟಿಸಿ ಬಸ್ ಸಕ್ರೆಬೈಲಿನ ಬಳಿ ಕಾರೊಂದಕ್ಕೆ ಡಿಕ್ಕಿ ಹೊಡೆದಿದೆ. ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿ ಎಷ್ಟು ಮಂದಿ ಇದ್ದರು ಏನಾಗಿದೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ಕೆಎಸ್ ಆರ್ ಟಿಸಿ ಬಸ್ ನಲ್ಲಿ ಕೇವಲ 8 ಜನ ಪ್ರಯಾಣಿಕರಿದ್ದು ಇವರಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.