ಗದಗ: ಹುಲಕೋಟಿಯಲ್ಲಿ ಅಪ್ಪಟ ದೇಶಿ ಉಡುಗೆಯಲ್ಲಿ ಮಿಂದೆದ್ದ ನೀರೆಯರು
Gadag, Gadag | Jun 6, 2025 ಆ ಅಂಗಳದಲ್ಲಿ ಹಳ್ಳಿ ಸೊಗಡಿನ ಅಂದ ತುಂಬಿಕೊಂಡಿತ್ತು. ಎತ್ತಿನ ಚಕ್ಕಡಿ ಏರಿ ಬಂದ ಹುಡುಗ, ಹುಡುಗಿಯರ ಗತ್ತು, ಗಮ್ಮತ್ತು, ಭಿನ್ನಾನ, ವೈಯಾರ, ಕ್ಯಾಟ್‌ವಾಕ್, ಡ್ಯಾನ್ಸ್ ಎಲ್ಲವೂ ಸಖತ್ ಆಗಿತ್ತು. ತಾಲೂಕಿನ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಕಾನೂನು ಮಹಾವಿದ್ಯಾಲಯ ಕಲರ್ ಫುಲ್ ಆಗಿ ಕಾಣುವ ಮೂಲಕ ಸಾಂಪ್ರದಾಯಿಕ ದಿನಕ್ಕೆ ಸಾಕ್ಷಿಯಾಗಿತ್ತು. ನಿತ್ಯ ಪಠ್ಯ-ಪಾಠದ ಜಂಜಾಟದಲ್ಲಿ ಮೂಳುಗುತ್ತಿದ್ದ, ವಿದ್ಯಾರ್ಥಿಗಳಿಗೆ ಮನೋರಂಜನೆಯ ಜೊತೆಗೆ ನಮ್ಮ ತನದ ಅರಿವು ಮೂಡಿಸಲು ಕಾಲೇಜು ಅಂಗಳ ಉತ್ತಮ ವೇದಿಕೆಯಾಯಿತು.