ಶಿರಹಟ್ಟಿ: ಪಟ್ಟಣದಲ್ಲಿ ವಿವಿಧ ಕಾಮಗಾರಿಗೆ ಸಿಇಒ ಭೇಟಿ, ಪರಿಶೀಲನೆ
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ಅವರು ಶಿರಹಟ್ಟಿ ತಾಲೂಕಿನಲ್ಲಿ ನಬಾರ್ಡ ಯೋಜನೆಯಡಿ ಪ್ರಗತಿಯಲ್ಲಿರುವ 100 ಹಾಸಿಗೆಯ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನೆಡೆಸಿದರು. ಇದೆ ಸಂದರ್ಭದಲ್ಲಿ ಶಿರಹಟ್ಟಿ ವ್ಯಾಪ್ತಿಯ ಸಿ. ಸಿ. ಏನ್ ಸರಕಾರಿ ಪ್ರಾಢಶಾಲೆಗೆ ದಿಢೀರ್ ಭೇಟಿ ನೀಡಿ ಮಕ್ಕಳ ಧಾಖಲಾತಿ, ಬೋಧನಾ ಗುಣಮಟ್ಟ, ಶಾಲಾ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ, ಅಡುಗೆ ಕೋಣೆಗಳಿಗೆ ಭೇಟಿ ನೀಡಿ ಸ್ವಚ್ಛತೆಯನ್ನು ಅವಲೋಕಿಸಿದರು. ನಂತರ ತಾಲೂಕಿನ ಬೆಳ್ಳಟ್ಟಿ ಗ್ರಾಮ ಪಂಚಾಯತ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಬಾಣಂತಿಯರ ಧಾಖಲಾತಿ, ಪರಿಶೀಲನೆ ಮಾಡಿದರು.