ಬೆಂಗಳೂರು ಉತ್ತರ: 22 ರಿಂದ ದೆಹಲಿಯಲ್ಲಿ ಮನರೇಗಾ ಹೋರಾಟ: ನಗರದಲ್ಲಿ ಮಲ್ಲಿಕಾರ್ಜುನ ಖರ್ಗೆ
ಮನರೇಗಾ ಹೋರಾಟ ವಿಚಾರಕ್ಕೆ ಸಂಬಂಧಿಸಿ ಸೋಮವಾರ ಮಧ್ಯಾಹ್ನ 2:3 ರ ಸುಮಾರಿಗೆ ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಮನರೇಗಾ ಹೋರಾಟ 22 ರಿಂದ ದೆಹಲಿಯಲ್ಲಿ ನಡೆಯುತ್ತೆ ಅಂದು 10 ಗಂಟೆಗೆ ನೆಹರು ಸ್ಟೇಡಿಯಂನಲ್ಲಿ ನಡೆಯಲಿದೆ, ರಾಹುಲ್ ಗಾಂಧಿ, ನಾವು ಎಲ್ಲರು ಚಾಲನೆ ನೀಡ್ತೇವೆ ಸಾಕಷ್ಟು NGOಗಳು ಇದರಲ್ಲಿ ಭಾಗವಹಿಸುತ್ತವೆ. ನರೇಗಾ ಯೋಜನೆಗೆ ಕೊಡಲಿ ಪೆಟ್ಟು ಹಾಕಿದ್ದಾರೆ. ಮೋದಿ ಸರ್ಕಾರ ಬಡವರಿಗೆ ಆಘಾತ ನೀಡಿದೆ ರೈಟ್ ಟು ವರ್ಕ್ ಕಸಿದುಕೊಂಡಿದ್ದಾರೆ ರಾಜ್ಯಗಳಿಗೆ ಸಾವಿರಾರು ಕೋಟಿ ಹೊರೆ ಹಾಕಿದ್ದಾರೆ. 10% ರಿಂದ 4% ಏರಿಕೆ ಮಾಡಿದೆ, ಕೂಡಲೇ ಈ ಯೋಜನೆ ಕೈ ಬಿಡಬೇಕು, ಇಲ್ಲವಾದ್ರೆ ಬಡವರಿಗೆ ತೊಂದರೆಯಾಗಲಿದೆ.