ಸಚಿವ ತಿಮ್ಮಾಪುರ ಅವರ ಅಬಕಾರಿ ಇಲಾಖೆಯಲ್ಲಿನ ಲಂಚ ಆರೋಪ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದು, ಈ ಹಿಂದೆ ಕೂಡ ಈ ವಿಷಯ ಪ್ರಸ್ತಾಪವಾಗಿತ್ತು. ಏನೇ ಆರೋಪ ಇದ್ದರೂ ದಾಖಲೆಗಳನ್ನು ನೀಡಲಿ ಎಂದು ಹೇಳಿದರು. ಲೋಕಾಯುಕ್ತಕ್ಕೆ ಅಧಿಕಾರಿಗಳು ಸಿಕ್ಕಿಬಿದ್ದಿರುವುದು ಸತ್ಯ, ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದರು. ಆರೋಪ ಸಾಬೀತಾದರೆ ರಾಜೀನಾಮೆ ನೀಡುತ್ತೇನೆ ಎಂದು ಸಚಿವರು ಈಗಾಗಲೇ ಹೇಳಿದ್ದಾರೆ. ಬಿಜೆಪಿ ಹಿಟ್ ಅಂಡ್ ರನ್ ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದರು. ಅಧಿವೇಶನದಲ್ಲಿ ಮಾತನಾಡಲಿ, ಅಲ್ಲೇ ದಾಖಲೆ ನೀಡಲಿ ಎಂದರು. ಇನ್ನು ಬಳ್ಳಾರಿ ಪ್ರಕರಣ ಸಿಬಿಐ ತನಿಖೆ ವಿಚಾರದಲ್ಲಿ, ಸಿಬಿಐ ತಾವೇ ಪತ್ರ ಬರೆದು ರಾಜ್ಯವೇ ತನಿಖೆ ನಡೆಸ