ನೆಲಮಂಗಲ: ತ್ಯಾಮಗೊಂಡ್ಲುವಿನಲ್ಲಿ ರೈತರ ಸಭೆ ಗಕ್ವಿನ್ ಸಿಟಿ ನಿರ್ಮಾಣ ಪ್ರಕ್ರಿಯೆಗೆ ಭೂ ಸ್ವಾಧೀನ ಎಕರೆಗೆ ಎರಡುವರೆ ಕೋಟಿ ಪರಿಹಾರ ನೀಡುವಂತೆ ರೈತರ ಆಗ್ರಹ
ಗ್ರೀನ್ ಸಿಟಿ ನಿರ್ಮಾಣ ಪ್ರಕ್ರಿಯೆಗೆ ಭೂ ಸ್ವಾಧೀನಕ್ಕೆ ಒಳಪಡುವ ಭೂಪ್ರದೇಶಕ್ಕೆ ಸಂಬಂಧಿಸಿದಂತೆ ತ್ಯಾಮಗೊಂಡ್ಲು ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಕೆ ಐ ಎ ಡಿ ಬಿ ಜಿಲ್ಲಾಧಿಕಾರಿ ರಘುನಂದನ್ ಅವರ ಅಧ್ಯಕ್ಷತೆಯಲ್ಲಿ ದರ ನಿಗದಿ ಸಭೆ ನಡೆಯಿತು ಜಿಲ್ಲಾ ಅಧಿಕಾರಿ ರಘುನಂದನ್ ಮಾತನಾಡಿ ರೈತರು ತಮ್ಮ ಜಮೀನಿನ ಹಣವನ್ನು ಪಡೆದೆ ಇದ್ದಲ್ಲಿ ಕೆಎಡಿಬಿ ವತಿಯಿಂದ ಅಭಿವೃದ್ಧಿಪಡಿಸಿದ ಹಾಗೂ ವ್ಯಾಪಾರ ಕೇಂದ್ರಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಒಂದು ಎಕರೆ ಭೂಮಿ ಬದಲಿಗೆ 100781 ಅಡಿಗಳಷ್ಟು ಭೂಮಿಯನ್ನು ನೀಡುತ್ತೇವೆ ಇದು ನಿಮ್ಮ ಭವಿಷ್ಯಕ್ಕೆ ಸಹಕಾರಿಯಾಗಲಿದೆ ಎಂದರು ಇನ್ನು ಎಕರೆಗೆ ಎರಡುವರೆ ಕೋಟಿ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದರು