ಬೆಂಗಳೂರು ಉತ್ತರ: ಧರ್ಮಸ್ಥಳ ಬಿಜೆಪಿಯವರ ಮನೆ ಆಸ್ತಿಯಲ್ಲ: ನಗರದಲ್ಲಿ ಡಿಸಿಎಂ ಶಿವಕುಮಾರ್
ಬಿಜೆಪಿಯವರು ನಡೆಸುತ್ತಿರುವ ಧರ್ಮಸ್ಥಳ ಯಾತ್ರೆ ರಾಜಕೀಯದ ಯಾತ್ರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.ಆಗಸ್ಟ್ 17ರಂದು ಬೆಳಿಗ್ಗೆ 11:30ಕ್ಕೆ ಸದಾಶಿವನಗರದ ತಮ್ಮ ನಿವಾಸದ ಬಳಿ ಅವರು ಪ್ರತಿಕ್ರಿಯಿಸಿದರು. ಈ ವೇಳೆ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಬಿಜೆಪಿ ನಾಯಕರು ಕೈಗೊಂಡಿರುವ ಯಾತ್ರೆಯ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ "ಇದು ಧರ್ಮದ ಯಾತ್ರೆಯಲ್ಲ.ಧರ್ಮ,ಧರ್ಮಸ್ಥಳ ಬಿಜೆಪಿಯವರ ಮನೆ ಆಸ್ತಿಯಲ್ಲ.ಧರ್ಮಸ್ಥಳ ಸಾರ್ವಜನಿಕರ ಸ್ವತ್ತು" ಎಂದು ತಿಳಿಸಿದರು.