ಸಿಂಧನೂರು: ತುರವಿಹಾಳ ಪಟ್ಟಣದ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಶಾಸಕ ಆರ್ ಬಸನಗೌಡ ಭೂಮಿ ಪೂಜೆ
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತುರುವಿಹಾಳ ಪಟ್ಟಣದ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಶಾಸಕರು ಹಾಗೂ ಖಾದಿ ಮತ್ತು ಗ್ರಾಮೋದ್ಯೋಗ ನಿಗಮದ ಅಧ್ಯಕ್ಷರಾದ ಆರ್ ಬಸನಗೌಡ ಭೂಮಿ ಪೂಜೆ ನೆರವೇರಿಸಿ ತದನಂತರ ಮಾತನಾಡಿದ ಅವರು ಕಾಮಗಾರಿಯನ್ನು ಕೆಕೆಆರ್‌ಡಿಬಿ ಯೋಜನೆಯ ಅಡಿಯಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು ಮೂರು ಕೋಟಿ ಅಂದಾಜು ಮೊತ್ತದಲ್ಲಿ ಈ ಕಾಮಗಾರಿಯನ್ನು ಮಾಡಲಾಗುತ್ತಿದ್ದು ಕಾಮಗಾರಿಯನ್ನು ಕಾಲಮಿತಿಯಲ್ಲಿ ಹಾಗೂ ಅಚ್ಚುಕಟ್ಟಾಗಿ ಮಾಡಬೇಕು ಎಂದು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚನೆಯನ್ನು ನೀಡಿದರು.