ಶಿರಸಿ: ಭೈರುಂಬೆಯ ಹುಳಗೋಳ ಪ್ರಾಥಮಿಕ ಸಹಕಾರಿ ಸಂಘ ರಾಜ್ಯಕ್ಕೆ ಪ್ರಥಮ
ಶಿರಸಿ : ಅಂತರಾಷ್ಟ್ರೀಯ ಸಹಕಾರ ವರ್ಷ 2025 ಮತ್ತು 44ನೇ ನಬಾರ್ಡ ಸ್ಥಾಪನಾ ದಿವಸದ ಅಂಗವಾಗಿ ಗ್ರಾಮೀಣಾಭಿವೃದ್ದಿ ಮತ್ತು ಸುಸ್ಥಿರ ಕೃಷಿ ಪದ್ದತಿಯಿಂದ ರಾಷ್ಟ್ರದ ಅಭಿವೃದ್ದಿಗೆ ಕಾರಣೀಕೃತ ಸಹಕಾರ ಕ್ಷೇತ್ರದ ಪ್ರಾಥಮಿಕ ಸಂಘಗಳ ವಿಭಾಗದಲ್ಲಿ ಹಣಕಾಸೇತರ ಚಟುವಟಿಕೆಗಾಗಿ ಶಿರಸಿ ತಾಲೂಕಿನ ಭೈರುಂಬೆಯ ಹುಳಗೋಳ ಪ್ರಾಥಮಿಕ ಸಹಕಾರಿ ಸಂಘ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ತಾಲೂಕಿಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದೆ. ಈ ಬಗ್ಗೆ ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ.ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಆರ್ ಎಸ್ ಭಟ್ಟ ನಿಡಗೋಡು ಮತ್ತು ಮುಖ್ಯಕಾರ್ಯನಿರ್ವಾಹಕ ಜಿ ಎಂ.ಹೆಗಡೆ ಮಾತ್ನಳ್ಳಿ ಪ್ರಶಸ್ತಿ ಸ್ವೀಕರಿಸಿದರು.