ಶಿರಸಿ: ಸರಿ ಕನ್ನಡದ ಕುರಿತು ಅಭಿಯಾನ ಆಗಬೇಕಿದೆ: ರಂಗಧಾಮದಲ್ಲಿ ನಟ, ನಿರ್ದೇಶಕ ಸುಚೇಂದ್ರಪ್ರಸಾದ
ಶಿರಸಿ: ಸರಿ ಕನ್ನಡದ ಕುರಿತು ಅಭಿಯಾನ ಆಗಬೇಕಿದೆ. ಓದು ಎಲ್ಲರ ತೆಕ್ಕೆಗೆ ಸಿಗುವಂತಾಗಬೇಕು ಎಂದು ವಾಗ್ಮಿ, ಪ್ರಸಿದ್ಧ ನಟ, ನಿರ್ದೇಶಕ ಸುಚೇಂದ್ರಪ್ರಸಾದ ತ್ರಿವೇದಿ ಹೇಳಿದರು. ಅವರು ಭಾನುವಾರ ಯಾಜಿ ಪ್ರಕಾಶನ ಪ್ರಕಟಿಸಿದ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ ಅವರ ಕಾದಂಬರಿ ಕರ್ಮಫಲ ಮಾತನಾಡಿದರು.ಹೊಳೆ ಸಾಲಿನ ವಿಸ್ಮಯದಲ್ಲಿ ಕೃತಿಕಾರರ ತನ್ಮಯರಾಗಿದ್ದು ಕಾಣುತ್ತದೆ. ಬಾಲ್ಯದ ನೆನಪಿನಲ್ಲಿ ಕಾದಂಬರಿ ಚೌಕಟ್ಟಿನಲ್ಲಿ ದಾಖಲಾಗುತ್ತಿದೆ. ಈ ನೆಲದ ಸತ್ವ ದಾಖಲಾದರೆ ಮುಂದಿನ ತಲೆಮಾರಿಗೆ ದಾಖಲಿಸಲು ಸಾಧ್ಯವಿದೆ ಎಂದರು.ಕೃತಿಕಾರ ಸಾಹಿತ್ಯ ಸೃಷ್ಟಿಗೆ ತನ್ಮಯರಾಗಬೇಕು. ಕೃತಿಕಾರರ ಕೃತಿಗಳ ಮೂಲಕ ಸಮಷ್ಟಿ ಪ್ರಜ್ಞೆಯ ಸಾಹಿತ್ಯ ರಚಿಸಬೇಕು ಎಂದರು.