ಕಲಬುರಗಿ: ಲಾಡ್ಲಾಪುರ ಬಳಿ ಅಪರಿಚಿತ ಮಹಿಳೆ ಕೊಲೆ ಮಾಡಿ ಶವ ಸುಟ್ಟ ಪ್ರಕರಣ, ವಾಡಿ ಠಾಣೆ ಪೊಲೀಸರಿಂದ ಇಬ್ಬರ ಬಂಧನ
ಕಲಬುರಗಿ : ಜೂ1 ರಂದು ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಬಳಿ ಅಪರಿಚಿತ ಮಹಿಳೆಯನ್ನ ಕೊಲೆ ಮಾಡಿ ಶವ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ವಾಡಿ ಠಾಣೆ ಪೊಲೀಸರು ಪ್ರಕರಣ ಬೇಧಿಸಿದ್ದಾರೆ.. ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆಯೆಂದು ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸುಲು ಹೇಳಿದ್ದಾರೆ. ಜೂ9 ರಂದು ಬೆಳಗ್ಗೆ 11 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಕೊಲೆಯಾದ ಮಹಿಳೆಯನ್ನ 42 ವರ್ಷದ ದೇವಿಬಾಯಿ ಎಂದು ಗುರುತಿಸಲಾಗಿದೆ. ಕೊಲೆ ಸಂಬಂಧ ಆಕೆಯ ಜೊತೆ ಸಂಬಂಧವಿಟ್ಟುಕೊಂಡಿದ್ದ ಸೋಮುಲು ಪವಾರ್ ಮತ್ತು ಹಾಮು ಎಂಬಾತರನ್ನ ಬಂಧಿಸಲಾಗಿದೆ ಎಂದು ಎಸ್ಪಿ ಹೇಳಿದ್ದಾರೆ.