ಕಲಬುರಗಿ: ಫಿರೋಜಾಬಾದ್ ಬಳಿ ಕೊಲೆ ಆರೋಪಿ ನಜಮೋದ್ದಿನ್ ಹತ್ಯೆ ಪ್ರಕರಣ, ಹತ್ಯೆಗೂ ಮುನ್ನ ದಾಳಿಯ ಸಿಸಿಟಿವಿ ದೃಶ್ಯ ವೈರಲ್
ಕಲಬುರಗಿ : ಕಲಬುರಗಿ ತಾಲೂಕಿನ ಫಿರೋಜಾಬಾದ್ ಬಳಿ ಕೊಲೆ ಆರೋಪಿ ನಜಮೋದ್ದಿನ್ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಜಮೋದ್ದಿನ್ ಹತ್ಯೆಗೂ ಮುನ್ನ ಸೆಂಟ್ರಲ್ ಜೈಲ್ ಬಳಿ ಆತನ ಕಾರಿನ ಮೇಲೆ ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಿರೋ ಸಿಸಿ ಟಿವಿ ವಿಡಿಯೋ ವೈರಲ್ ಆಗಿದ್ದು, ಜೂ9 ರ ಬೆಳಗ್ಗೆ 8 ಗಂಟೆಗೆ ಸಿಸಿ ಟವಿ ವಿಡಿಯೋ ಪಬ್ಲಿಕ್ ಆ್ಯಪ್ಗೆ ಲಭ್ಯವಾಗಿದೆ. ಇನ್ನೊವಾ ಕಾರಿನಲ್ಲಿ ಬಂದ ನಾಲ್ಕೈದು ಜನರ ತಂಡ ನಡುರಸ್ತೆಯಲ್ಲೆ ಕಾರು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡ್ತಿರೋ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸೆಂಟ್ರಲ್ ಜೈಲಿನ ಬಳಿ ದಾಳಿ ತಪ್ಪಿಸಿಕೊಂಡು ಫಿರೋಜಾಬಾದ್ ಬಳಿ ಹೋಗಿದ್ದ ವೇಳೆ ನಜಮೋದ್ದಿನ್ನ ಕಾರು ಅಡ್ಡಗಟ್ಟಿ ಹತ್ಯೆ ಮಾಡಲಾಗಿತ್ತು.