ಮೂಡಿಗೆರೆ: ತಾಲ್ಲೂಕಿನ ಶಿರವಳಲು ಗ್ರಾಮದ ಬಳಿ ಕೆಎಸ್‌ಆರ್‌ಟಿಸಿ ಬಸ್-ಟ್ಯಾಂಕರ್ ಲಾರಿ ಮಧ್ಯೆ ಡಿಕ್ಕಿ, ಅನೇಕರಿಗೆ ಗಾಯ
ಮೂಡಿಕೆರೆ ತಾಲೂಕಿನ ಶಿರವಳಲು ಗ್ರಾಮದ ಬಳಿ ಕೆ ಎಸ್ ಆರ್ ಟಿ ಸಿ ಬಸ್ ಮತ್ತು ಟ್ಯಾಂಕರ್ ಲಾರಿಯ ನಡುವೆ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಹತ್ತಾರು ಪ್ರಯಾಣಿಕರಿಗೆ ಗಾಯಗಳಾಗಿವೆ ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಅಪಘಾತವಾದ ರಭಸಕ್ಕೆ ಬಸ್ ನ ಮುಂಭಾಗ ನುಚ್ಚುಗುಜ್ಜಾಗಿದ್ದು, ಕಡೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಘಟನೆ ಸಂಬಂಧ ಆಲ್ದೂರು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.