ಶಿರಸಿ: ತಾಲೂಕಾ ಆಡಳಿತ ಸೌಧದ ಎದುರು ಸ್ವತಃ ತಾವೇ ವಾಹನ ಚಲಾಯಿಸಿ ಕಾರ್ಮಿಕ ಸಂಚಾರಿ ಆರೋಗ್ಯ ಘಟಕ ಅಂಬುಲೆನ್ಸ ಸೇವೆಗೆ ಚಾಲನೆ
ಶಿರಸಿ : ಕಾರ್ಮಿಕರ ಸಂಚಾರಿ ಆರೋಗ್ಯ ಘಟಕ ಅಂಬುಲ್ಯಾನ್ಸ್ ಸೇವೆಗೆ ಸ್ವತಃ ತಾವೇ ವಾಹನ ಚಲಾಯಿಸಿ ಮಾಡಿ ಶಾಸಕ ಭೀಮಣ್ಣ ನಾಯ್ಕ ಸೇವೆಗೆ ಚಾಲನೆ ನೀಡಿದರು. ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷೆ ಯೋಜನೆಗೊಳಲ್ಲೊಂದಾದ ಕಾರ್ಮಿಕರಿಗಾಗಿ ಸಿದ್ದಪಡಿಸಿರುವ ಸಂಚಾರಿ ಆರೋಗ್ಯ ಘಟಕ ಅಂಬ್ಯಲೆನ್ಸ್ ವಾಹನ ಶಿರಸಿ,ಮುಂಡಗೋಡ,ಸಿದ್ದಾಪುರ ಹಾಗು ಯಲ್ಲಾಪುರದಲ್ಲಿ ಶುಕ್ರವಾರ ಕಾರ್ಯರಂಭಮಾಡಿದ್ದು ಈ ಸೇವೆಗೆ ಶಾಸಕ ಭೀಮಣ್ಣ ಟಿ ನಾಯ್ಕ ತಾಲೂಕಾ ಆಡಳಿತ ಸೌಧದ ಎದುರು ಹಸಿರು ನಿಶಾನೆ ತೋರಿಸಿ ಸ್ವತಃ ತಾವೇ ವಾಹನ ಚಲಾಯಿಸಿದರು.