ಶಿರಸಿ: ಹಲಸಿನಕೊಪ್ಪದಲ್ಲಿ ಮನೆ ಕುಸಿತ, ಸಂತ್ರಸ್ತ ಕುಟುಂಬಕ್ಕೆ ಪರಿಹಾರ ವಿತರಿಸಿದ ಶಾಸಕ ಭೀಮಣ್ಣ
ಶಿರಸಿ : ಶಾಸಕ ಭೀಮಣ್ಣ ನಾಯ್ಕ ಅವರು ಗುರವಾರ ಶಿರಸಿ ತಾಲೂಕಿನ ಕೊಡ್ನಗದ್ದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲಸಿನಕೊಪ್ಪದಲ್ಲಿ, ಭಾರಿ ಮಳೆಯಿಂದಾಗಿ ಕುಸಿದಿರುವ ಮಡುರಾ ಮಾಸ್ತ್ಯ ದೇವಾಡಿಗ ಅವರ ಮನೆಗೆ ಭೇಟಿ ನೀಡಿದರು. ಭೇಟಿಯ ಸಂದರ್ಭದಲ್ಲಿ ಹಾನಿ ವೀಕ್ಷಣೆ ಮಾಡಿ, ಸರಕಾರದಿಂದ ಬಂದಿರುವ ಪರಿಹಾರ ಧನವನ್ನು ಸಂತ್ರಸ್ತ ಕುಟುಂಬಕ್ಕೆ ವಿತರಿಸಿದಲ್ಲದೆ, ಸಾಂತ್ವನ ಹೇಳಿದರು.ಅಲ್ಲದೆ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ ವಸತಿ ಯೋಜನೆಯಡಿಯಲ್ಲಿ ಮನೆ ನೀಡಲು ಸ್ಥಳದಲ್ಲಿಯೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಕೋಡ್ನಗದ್ದೆ ಗ್ರಾಪಂ ಭಾಗದ ಪ್ರಮುಖರು ಇದ್ದರು.