ಶಿರಸಿ: ಪಂಡಿತ ಸಾರ್ವಜನಿಕ ಆಸ್ಪತ್ರೆ ಎದುರು ಸೇರಿದಂತೆ ವಿವಿಧೆಡೆ ಗುಂಡಿ ಮುಚ್ಚಿದ ಇಲಾಖೆ : ಶಾಸಕ ಭೀಮಣ್ಣರಿಂದ ವೀಕ್ಷಣೆ
ಶಿರಸಿ : ನಗರದ ವಿವಿಧ ಕಡೆಗಳಲ್ಲಿ ಹೊಂಡ ಬಿದ್ದ ಸ್ಥಳಗಳನ್ನು ಶಾಸಕ ಭೀಮಣ್ಣ ನಾಯ್ಕ ಮುತವರ್ಜಿ ವಹಿಸಿ ಅಧಿಕಾರಿಗಳಿಗೆ ಸೂಚಿಸಿ ಗುಂಡಿಗಳನ್ನು ತುಂಬಿಸಿದರು. ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆ, ಅಶ್ವಿನಿ ಸರ್ಕಲ್ ನಿಂದ ಎಮ್ ಎಮ್ ಕಲಾ ಮತ್ತು ವಿಜ್ಞಾನ ಕಾಲೇಜ್ ರಸ್ತೆ ವರೆಗೂ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದು ವಾಹನ ಸವಾರರಿಗೆ ಮತ್ತು ವಿದ್ಯಾರ್ಥಿಗಳಿಗೆ ತಂಬಾ ತೊಂದರೆಯಾಗಿತ್ತು. ಅಲ್ಲದೇ ವಾಹನ ಸವಾರರು ಗುಂಡಿ ತಪ್ಪಿಸಲು ಹೋಗಿ ಪ್ರಾಣಕ್ಕೆ ಆಪತ್ತು ತರುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನಲೆಯಲ್ಲಿ ಶಾಸಕರು ಮುತವರ್ಜಿ ವಹಿಸಿ ಲೊಕೊಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.