ಶಿರಸಿ: ಒಕ್ಕಲಕೊಪ್ಪದಲ್ಲಿ ಅಳಿಯನಿಂದಲೇ ಅತ್ತೆಯ ಕೊಲೆ : 24 ಗಂಟೆಯ ಒಳಗಡೆ ಆರೋಪಿ ಬಂಧನ
ಶಿರಸಿ: ತಾಲೂಕಿನ ದೊಡ್ನಳ್ಳಿ ಗ್ರಾಪಂ ವ್ಯಾಪ್ತಿಯ ಒಕ್ಕಲಕೊಪ್ಪದಲ್ಲಿ ಅಳಿಯನು ಅತ್ತೆಯ ಮೇಲೆ ಮಾರಣಾತಿಕ ಹಲ್ಲೆ ನಡೆಸಿ, ಕೊಲೆ ಮಾಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ತಾಲೂಕಿನ ದೊಡ್ನಳ್ಳಿ ಗ್ರಾ.ಪಂ. ವ್ಯಾಪ್ತಿಯ ಒಕ್ಕಲಕೊಪ್ಪದ ಬಸವರಾಜ ಮುಟ್ಟಪ್ಪ ನಾಯ್ಕ (42) ಕೊಲೆ ಮಾಡಿದ ಆರೋಪಿಯಾ ಗಿದ್ದು, ಕಮಲಾ ನಾರಾಯಣ ನಾಯ್ಕ (70) ಕೊಲೆಯಾದವಳು. ನನ್ನ ತಾಯಿ ಮತ್ತು ನನ್ನ ಗಂಡನ ಜತೆ ಪ್ರತಿದಿನ ಸಣ್ಣಮಟ್ಟ ವಿಷಯಕ್ಕೂ ಗಲಾಟೆಯಾಗುತ್ತಿತ್ತು. ಗಂಡನು ನನ್ನ ತಾಯಿಯ ವಿರುದ್ಧ ದ್ವೇಷದಿಂದ ಜು 10 ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ತಾಯಿ ಕಮಲಾಳೊಂದಿಗೆ ಜಗಳ ಮಾಡಿ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾನೆ. ಗಂಡ ಬಸವರಾಜ ನಾಯ್ಕ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ದೂರು ನೀಡಲಾಗಿತ್ತು.