ಬಳ್ಳಾರಿ: ಬ್ಯಾಂಕಿಂಗ್, SSC, RRB ಪರೀಕ್ಷೆಗಳಿಗೆ ಉಚಿತ ತರಬೇತಿ: ಅಕ್ಟೋಬರ್ 31 ರೊಳಗೆ ನೋಂದಾಯಿಸಿಕೊಳ್ಳಿ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಬ್ಯಾಂಕಿಂಗ್, ಎಸ್ಎಸ್ಸಿ ಮತ್ತು ಆರ್ಆರ್ಬಿ ಪರೀಕ್ಷೆಗಳಿಗಾಗಿ 45 ದಿನಗಳ ವಿಶೇಷ ತರಬೇತಿಯನ್ನು ಆಯೋಜಿಸಿದೆ. ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 31 ರೊಳಗೆ ಹೆಸರು ನೋಂದಾಯಿಸಿಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ 0821-2515944 ಸಂಖ್ಯೆಗೆ ಸಂಪರ್ಕಿಸಿ.