ಮಂಡ್ಯದಲ್ಲಿ ರೈತ ಮಂಜೇಗೌಡ ಆತ್ಮಹತ್ಯೆ ಪ್ರಯತ್ನ ವಿಚಾರಕ್ಕೆ ಸಂಬಂಧಿಸಿ ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ 7 ಮಿನಿಸ್ಟರ್ ಕ್ವಾಟ್ರಸ್ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು, ಅವರು ಪತ್ರದಲ್ಲಿ 53 ಅಪ್ಲಿಕೇಷನ್ ಹಾಕಿದ್ದ ವಿಚಾರ ಹಾಗೂ ಅರಣ್ಯ ಇಲಾಖೆ ತೊಂದರೆ ವಿಚಾರವನ್ನೂ ಬರೆದಿದ್ದಾರೆ. ಅವರ ಕುಟುಂಬದ ಸಮಸ್ಯೆ ಬಗ್ಗೆಯೂ ಬರೆದಿದ್ದಾರೆ. ಅದು ಅವರ ವೈಯಕ್ತಿಕ ವಿಚಾರ. ಮಂಡ್ಯಗೆ ಬಂದಿದ್ದಾರೆ ಆದರೆ ಯಾರನ್ನೂ ಭೇಟಿ ಮಾಡಿಲ್ಲ. ಎಸ್ ಪಿ ಕಚೇರಿಗೆ ಹೋಗಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ನಂತರ ಟ್ರೀಟ್ಮೆಂಟ್ ತಕ್ಷಣ ಆಗಿಲ್ಲ ಸಾವನ್ನಪ್ಪಿದ್ದಾರೆ. ಅವರು ಇದ್ದು ಜಯಿಸಬೇಕಿತ್ತು. ನಾವು ಸ್ಪಾಟ್ ಗೆ ಹೋಗಿದ್ದೆವು, ಕುಟುಂಬದ ಜೊತೆ ಮಾತನಾಡಿದ್ದೇವೆ.