ಶಿವಮೊಗ್ಗ: ಪಿಳ್ಳಂಗೆರೆ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಖಾಸಗಿ ಬಸ್
ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ರಸ್ತೆ ಬದಿಗೆ ಉರುಳಿದೆ. ಶಿವಮೊಗ್ಗ ತಾಲೂಕು ಪಿಳ್ಳಂಗೆರೆ ಸೋಮವಾರ ಮಧ್ಯರಾತ್ರಿ ಈ ಘಟನೆ ಸಂಭವಿಸಿದೆ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಪಿಳ್ಳಂಗೆರೆ ಬಳಿ ತಿರುವಿನಲ್ಲಿ ಅಪಘಾತಕ್ಕೀಡಾಗಿದೆ. ವಿದ್ಯುತ್ ಕಂಬ ಮತ್ತು ಓಮಿನಿ ಕಾರಿಗೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಬಚ್ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ವಿದ್ಯುತ್ ಕಂಬಕ್ಕೆ ಬಸ್ ಟಿಕೆಟ್ಯಾಗುತ್ತಿದ್ದಂತೆ ವಿದ್ಯುತ್ ವೈರ್ ಬಸ್ ಮೇಲೆ ಬಿದ್ದಿತ್ತು ತಂತಿಯಲ್ಲಿ ವಿದ್ಯುತ್ ಪ್ರವಹಿಸುತ್ತಿತ್ತು ಇದೇ ವೇಳೆ ದಾರಿಯಲ್ಲಿ ತೆಳ್ಳುತ್ತಿದ್ದ ಇತರೆ ವಾಹನಗಳ ಪ್ರಯಾಣಿಕರು ಕೂಡಲೇ ರಕ್ಷಣೆಗೆಧಾವಿಸದ್ದಾರೆ.