ಮೂಡಿಗೆರೆ: ತಾಲೂಕಿನ ಬಿನ್ನಡಿ ಗ್ರಾಮಕ್ಕೆ ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಭೇಟಿ, ಮನೆ ಕಳದುಕೊಂಡವರಿಗೆ ಶೀಘ್ರ ಪರಿಹಾರಕ್ಕೆ ಒತ್ತಾಯ
ಬಣಕಲ್ ಹೋಬಳಿಯ ಕೊಟ್ಟಿಗೆಹಾರದ ಬಿನ್ನಡಿಯ ದಿನೇಶ್,ಅಜಾದ್ ನಗರದ ಸುರೇಶ್,ಕುವೆಂಪುನಗರದ ಸುನೀತಾ,ಗುಡ್ಡಹಟ್ಟಿಯ ಲಿಲ್ಲಿ ಡಿಸೋಜ,ಶಾಂತಿನಗರ ಹಮೀದ್,ಇಂದಿರಾನಗರದ ಕೆಂಚಮ್ಮ ಅವರ ಮನೆ ಕುಸಿತ ಪ್ರದೇಶಕ್ಕೆ ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಸೋಮವಾರ ಸಂಜೆ 5 ಗಂಟೆಗೆ ಭೇಟಿ ನೀಡಿ ಸರಕಾರದಿಂದ ಮನೆ ಕಳೆಸುಕೊಂಡವರಿಗೆ ಐದು ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿದರು.