ಶಿವಮೊಗ್ಗ: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಕಾಲದಲ್ಲಿ ಆಗಿರುವ ಕಾಮಗಾರಿ ಕಳಪೆ: ನಗರದಲ್ಲಿ ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್ ಆರೋಪ
ಮೊನ್ನೆ ತಾನೇ ಕೆಲವು ಸರ್ಕಾರಿ ಕಟ್ಟಡಗಳ ಉದ್ಘಾಟನೆ ಜಿಲ್ಲೆಯಲ್ಲಿ ಆಗಿದೆ. ಮಾನ್ಯ ಗೃಹ ಸಚಿವರು ಹಾಜರಾಗಬೇಕಿತ್ತು ಹವಾಮಾನ ವೈಫಲ್ಯ ಅವರು ಹಾಜರಾಗಿಲ್ಲ. ಇನ್ನ ಮಾಧ್ಯಮಗಳಲ್ಲಿ ಕಳಪೆ ಕಾಮಗಾರಿ ಅನ್ನೋ ಸುದ್ದಿಯಾಗಿದೆ. ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕಾಲದಲ್ಲಿ ಆಗಿರುವ ಕಾಮಗಾರಿ ಅವು. ಇನ್ನಾ ಎಲ್ಲಾ ಕಾಮಗಾರಿಗಳ ಗುತ್ತಿಗೆದಾರನು ಒಬ್ಬನೇ.ಅವನು ಶಾಸಕರ ಸಹೋದರ ಸಂಬಂಧಿ, ಈ ವರ್ಷ ಹೆಚ್ಚು ಮಳೆಯಾಗಿಲ್ಲ. ಆದರೂ ಕಟ್ಟಡ ಸೋಲುತ್ತಿವೆ ಅಂದರೆ ಇದರಲ್ಲಿ ಬಹುದೊಡ್ಡ ಭ್ರಷ್ಟಾಚಾರ ಆಗಿದೆ ಎಂದು ಶಿವಮೊಗ್ಗದಲ್ಲಿ ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.