ಚಿಕ್ಕಮಗಳೂರು: ಶೃಂಗೇರಿ ತಾಲ್ಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹಾಗೂ ಎಸ್‌ಪಿ ಭೇಟಿ, ಪರಿಶೀಲನೆ
ಕಳೆದ ಒಂದು ವಾರದಿಂದ ಶೃಂಗೇರಿ ತಾಲ್ಲೂಕಿನಲ್ಲಿ ಸುರಿದ ಭಾರೀಮಳೆಯಿಂದ ಅತಿವೃಷ್ಠಿಗೆ ಒಳಗಾದ ಪ್ರದೇಶಕ್ಕೆ ಜಿಲ್ಲಾಧಿಕಾರಿ ಮೀನಾನಾಗರಾಜ್ ಮತ್ತು ಎಸ್ಪಿ ವಿಕ್ರಂ ಆಮಟೆ ಭೇಟಿ ನೀಡಿದರು. ಪಟ್ಟಣದ ಗಾಂಧಿ ಮೈದಾನ, ನೆಮ್ಮಾರ್ ಮಕ್ಕಿ, ತ್ಯಾವಣ, ನೆಮ್ಮಾರ್ ಸಮೀಪದ ತುಂಗಾ ನದಿಗೆ ನಿರ್ಮಿಸಿದ್ದ ಹೊಳೆಹದ್ದು ತೂಗು ಸೇತುವೆ, ನೆಮ್ಮಾರ್ ಸಾಲ್ಮರ ದರೆ ಕುಸಿತ ಸ್ಥಳ ವೀಕ್ಷಿಸಿದರು. ಜಿಲ್ಲಾಧಿಕಾರಿ ಮೀನಾನಾಗರಾಜ್ ಮಾತಾಡಿ, ಅತಿವೃಷ್ಠಿ ಪ್ರದೇಶಕ್ಕೆ ಭೇಟಿ ನೀಡಿದ್ದು, ದರೆ ಕುಸಿತವಾಗುತ್ತಿರುವ ಪ್ರದೇಶದಲ್ಲಿ ಇರುವ ಕಾಡು ಮರವನ್ನು ತುರ್ತಾಗಿ ತೆರವುಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿ ಎಇಇ ಮಂಜುನಾಥ್‍ಗೆ ಸೂಚನೆ ನೀಡಲಾಗಿದೆ ಎಂದರು.