ಕಲಬುರಗಿ : ಮಾತೆತ್ತಿದ್ರೆ ಆರ್‌ಎಸ್‌ಎಸ್‌ಗೆ ನೂರು ವರ್ಷದ ಇತಿಹಾಸವಿದೆ.. ಇಂದಿರಾಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರಿಂದ ಬ್ಯಾನ್ ಮಾಡೋಕೆ ಆಗ್ಲಿಲ್ಲ ಅನ್ನೊ ಛಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.. ಜು5 ರಂದು ಬೆಳಗ್ಗೆ 11 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಇತಿಹಾಸ ಇದೆ ಅನ್ನೊ ನಾರಾಯಣಸ್ವಾಮಿ ಅವರು ಆರ್‌ಎಸ್‌ಎಸ್‌ನ 100 ವರ್ಷದಲ್ಲಿ ಒಂದಾದರೂ ಒಳ್ಳೆ ಕಾರ್ಯಕ್ರಮ ಹೇಳಿ.. ಅದು ಹೋಗಲಿ ದೇಶದ ಅಭಿವೃದ್ಧಿಗೆ ಆರ್‌ಎಸ್‌ಎಸ್‌ನ ಕೊಡುಗೆ ಏನು ಅನ್ನೊದು ಹೇಳಿ ಅಂತಾ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.