ಬಿಜೆಪಿ ಪಾದಯಾತ್ರೆ ವಿಚಾರಕ್ಕೆ ಸಂಬಂಧಿಸಿ ಸಚಿವ ಎಂ.ಬಿ.ಪಾಟೀಲ್ ಅವರು ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಬಿಜೆಪಿಯವರದ್ದು ಅಕ್ರಮ ಪಾದಯಾತ್ರೆ, ಹಿಂದೆ ಜನಾರ್ಧನ ರೆಡ್ಡಿ ಸಚಿವರಾಗಿದ್ದರು. ಆಗ ಅವರ ಎಂಟೈರ್ ಟೀಂ ಗಡಿ ಕಿತ್ತು ಹಾಕಿತ್ತು. ಅಕ್ರಮ ಗಣಿಗಾರಿಕೆಗೆ ಕರ್ನಾಟಕ ಗಡಿ ಕಿತ್ತಿದ್ದರು. ಪ್ರಭಾವಿ ದೇವಸ್ಥಾನವನ್ನ ಹೊಡೆದು ಹಾಕಿದ್ದರು. ತಮ್ಮ ದುರಾಸೆಗೆ ರಿಪಬ್ಲಿಕ್ ಬಳ್ಳಾರಿ ಮಾಡಿದ್ರು. ಅಲ್ಲಿ ಗಣಿಯಿಂದ ಪಾಲು ಪಡೆದಿದ್ರು. ಅರಣ್ಯದಲ್ಲೂ ಗಣಿಗಾರಿಕೆ ಮಾಡಿದ್ದರು. ಅದು ವಿಶ್ವವಿಖ್ಯಾತ ಲೂಟಿಯಾಗಿತ್ತು ಎಂದು ತಿರಿಗೇಟು ನೀಡಿದರು.