ಕಲಘಟಗಿ ಪಟ್ಟಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಸಮಸ್ಯೆ ಹಾಗೂ ಅಪಘಾತಗಳು ಸಂಭವಿಸುತ್ತಿರುವ ಕಾರಣ ಕಲಘಟಗಿ ಪೊಲೀಸ್ ಠಾಣೆಯ ಸಿಪಿಐ ಶ್ರೀಶೈಲ್ ಕೌಜಲಗಿ ಹಾಗೂ ಸಿಬ್ಬಂದಿ ತಂಡ ರಸ್ತೆ ಪಕ್ಕದಲ್ಲಿ ಪಾರ್ಕಿಂಗ್ ಮಾಡಿರುವ ವಾಹನಗಳನ್ನು ತೆಗೆಸುವ ಕಾರ್ಯಚರಣೆ ಕೈಗೊಂಡಿದ್ದು ವಾಹನ ಮಾಲೀಕರಿಗೆ ದಂಡ ಹಾಕದೆ ವಾಹನದ ಟೈಯರ್ ಗಳ ಗಾಳಿ ತೆಗೆಯುವ ಮೂಲಕ ವಾಹನ ಸವಾರರಿಗೆ ಬಿಸಿ ಮುಟ್ಟಿಸಿದರು.