ಬೆಳಗಾವಿ: ಮೋಟಾರ ಪಂಪ್ ಕಳ್ಳರ ಬಂಧನ, 3.60 ಲಕ್ಷ ರೂ. ಮೌಲ್ಯದ ಸೊತ್ತು ಜಪ್ತಿ
ಬೆಳಗಾವಿಯ ಮಾರಿಹಾಳ ಠಾಣಾ ವ್ಯಾಪ್ತಿಯಲ್ಲಿ ರೈತರ ಜಮೀನಿನಲ್ಲಿ ಮೋಟಾರ ಪಂಪ್ ಮತ್ತು ಕೇಬಲ್ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 3.60 ಲಕ್ಷ ರೂ. ಮೌಲ್ಯದ 12 ಮೋಟಾರ ಪಂಪ್ಗಳು, ಕೇಬಲ್ ವೈರ್ ಹಾಗೂ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ.