ಹಿರಿಯೂರು : ತಾಲ್ಲೂಕಿನ ಸಕ್ಕರ ಗ್ರಾಮದಿಂದ ಕುರಿಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಕೇವಲ 24 ಗಂಟೆಗಳ ಒಳಗೆ ಪತ್ತೆಮಾಡಿ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಅಬ್ಬಿನಹೊಳೆ ಪೊಲೀಸರು ಯಶಸ್ವಿಯಾಗಿದ್ದಾರೆ. ಶಿರಾ ತಾಲ್ಲೂಕಿನ ದ್ವಾರನಕುಂಟೆ ಗ್ರಾಮದ 35 ವರ್ಷದ ಲಕ್ಷ್ಮೀಕಾಂತ ಬಂಧಿತ ಆರೋಪಿ. ತಾಲ್ಲೂಕಿನ ಸಕ್ಕರ ಗ್ರಾಮದ ಗುಂಡಪ್ಪ ಎಂಬುವವರ ಜಮೀನಿನಲ್ಲಿದ್ದ ಕುರಿ ರೊಪ್ಪದಿಂದ ಸುಮಾರು 9 ಲಕ್ಷದ 92 ಸಾವಿರ ರೂಪಾಯಿ ಬೆಲೆಬಾಳುವ 120 ಕುರಿಗಳನ್ನು ಇದೇ ನವೆಂಬರ್ 01 ರಂದು ರಾತ್ರಿ 09-00 ಗಂಟೆಯ ವೇಳೆಯಲ್ಲಿ ಕದ್ದೊಯ್ದಿದ್ದ. ಈ ಕುರಿತು ನವೆಂಬರ್ 03 ರಂದು ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.