ಗದಗ: ದುಂದೂರ ಹತ್ತಿರ ಹಿಂಬದಿಯಿಂದ ಟ್ರ್ಯಾಕ್ಟರ್‌ಗೆ ಗುದ್ದಿದ ಬಸ್, ತಪ್ಪಿದ ಅನಾಹುತ
Gadag, Gadag | May 28, 2025 ದುಂದೂರ ಹತ್ತಿರ ಹಿಂಬದಿಯಿಂದ ಟ್ರ್ಯಾಕ್ಟರ್ ಗೆ ಬಸ್ ಗುದ್ದಿದೆ. ಇದರಿಂದ ಭಾರಿ ಅನಾಹುತ ತಪ್ಪಿದೆ. ಹುಬ್ಬಳಿಯಿಂದ ನಾನ್ ಸ್ಟಾಪ್ ಬಸ್ ಗದಗ ಕಡೆಗೆ ಹೊರಟಿತ್ತು. ಅದೇ ಮಾರ್ಗವಾಗಿ ಚಲಿಸುತ್ತಿದ್ದ ಟ್ರ್ಯಾಕ್ಟರ್ ಟ್ರೈಲರ್ ಗೆ ಬಸ್ ಗುದ್ದಿದೆ. ಇದರಿಂದ ಬಸ್ ನ ಮುಂಬಾಗಕ್ಕೆ ಹಾನಿಯಾಗಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಪ್ರಯಾಣಿಕರನ್ನು ಬೇರೆ ಬಸ್ ಗೆ ಸ್ಥಳಾಂತರಿಸಲಾಗಿದೆ. ಒಟ್ಟಾರೆಯಾಗಿ ಈ ಅವಘಡದಿಂದಾಗಿ ಪ್ರಯಾಣಿಕರು ಪರದಾಟ ನಡೆಸಿದ್ದಾರೆ.