ಸೋಮವಾರಪೇಟೆ: ಶನಿವಾರಸಂತೆ: ಗುಡುಗಳಲೆ ತಿರುವಿನಲ್ಲಿ ಮಗುಚಿದ ಸಿಮೆಂಟ್ ಲಾರಿ; ತಪ್ಪಿದ ದೊಡ್ಡ ಅನಾಹುತ
ಶನಿವಾರಸಂತೆಯ ಗುಡುಗಳಲೆ ಅರಕಲಗೂಡು ತಿರುವಿನಲ್ಲಿ ಸಿಮೆಂಟ್ ತುಂಬಿದ ಲಾರಿ ಮಗುಚಿಬಿದ್ದಿದೆ. ಲಾರಿಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಳಿಜಾರಿನಿಂದ ಕೂಡಿದ ಈ ತಿರುವಿನಲ್ಲಿ ಪದೇ ಪದೇ ಅಪಘಾತಗಳು ನಡೆಯುತ್ತಿದ್ದು, ಕೂಡಲೇ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.