ರೈತರಿಗೆ ಸರಕಾರಿ ಸೌಲಭ್ಯಗಳ ಅರಿವು ಅಗತ್ಯ| ಪಟ್ಟಾಭಿರಾಮಯ್ಯ ಅಭಿಮತ ಸಹಕಾರಿ ಸಂಘದ ಸಿಇಓ ಅಭಿನಂದನಾ ಸಮಾರಂಭ. ನೆಲಮಂಗಲ:ರೈತರ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಬಿಡಿಸಿಸಿ ಬ್ಯಾಂಕ್ ಹಾಗೂ ಸರಕಾರದ ವತಿಯಿಂದ ಸಾಕಷ್ಟು ಯೋಜನೆಗಳ ಸೌಲಭ್ಯಗಳಿವೆ ಅವುಗಳನ್ನು ಸಂಘದ ಸಿಇಓಗಳು ರೈತರಿಗೆ ಮಾಹಿತಿ ನೀಡುವಂತಾಗಬೇಕು ಎಂದು ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನ ನಿರ್ದೇಶಕ ಮಾಚನಹಳ್ಳಿ ಪಟ್ಟಾಭಿರಾಮಯ್ಯ (ಜಯಣ್ಣ) ತಿಳಿಸಿದರು.