ಕೆಆರ್ ಪುರಂನಲ್ಲಿ ಭಯಾನಕ ರೋಡ್ ರೇಜ್ ಪ್ರಕರಣ ಬೆಳಕಿಗೆ ಬಂದಿದೆ. ಇತ್ತೀಚಿಗಷ್ಟೇ ದಂಪತಿಗಳಿಬ್ಬರೂ ಫುಡ್ ಡೆಲಿವರಿ ಬಾಯ್ ಗೆ ಕಾರಿನಿಂದ ಗುದ್ದಿ ಆತ ಸ್ಥಳದಲ್ಲೇ ಸಾವನಪ್ಪಿದ್ದ. ಅದಾದ ಬೆನ್ನಲ್ಲೇ ಮತ್ತೊಂದು ಈ ರೀತಿಯ ಪ್ರಕರಣ ಬೆಳಕಿಗೆ ಬಂದಿದ್ದು ಅನೇಕರ ನಿದ್ದೆ ಕೆಡಿಸಿದೆ. ಉದ್ದೇಶಪೂರ್ವಕವಾಗಿ ಕಾರಿಗೆ ಜಾಗ ಬಿಟ್ಟಿಲ್ಲ ಅನ್ನೋ ಕಾರಣಕ್ಕೆ ಬೈಕ್ ಚಾಲಕನಿಗೆ ಗುದ್ದಿರುವುದು ಗೊತ್ತಾಗಿದ್ದು ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇದೆ