ಕುಶಾಲನಗರ: ಬಾಣಂತಿಯರಿಗೆ ಅವಧಿ ಮುಗಿದ ಆಹಾರ ವಿತರಣೆ, ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಭೆ ತೀರ್ಮಾನ
ಕುಶಾಲನಗರದ ನೆಲ್ಯಾಹುದಕೇರಿಯಲ್ಲಿ ಬಾಣಂತಿಯರಿಗೆ ಅವಧಿ ಮುಗಿದ ಆಹಾರ ವಿತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ್ವಿಚಾರಕಿ ಮತ್ತು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಗ್ಯಾರಂಟಿ ಅನುಷ್ಠಾನ ಸಮಿತಿ ತೀರ್ಮಾನಿಸಿದೆ. ಸಭೆಗೆ ಗೈರಾದ ಮತ್ತು ಮಾಹಿತಿ ನೀಡದ ಅಧಿಕಾರಿಗಳಿಗೂ ನೋಟಿಸ್ ನೀಡಲು ಸೂಚನೆ ನೀಡಲಾಗಿದೆ.