ಬಂಟ್ವಾಳ: ಮಾಣಿಲ ಗ್ರಾಮದಲ್ಲಿ ಸ್ವಚ್ಛತೆಯೇ ಸೇವೆ-2026 ಅಭಿಯಾನ: ಗ್ರಾಮಸ್ಥರಿಂದ ಶ್ರಮದಾನ
ಮಾಣಿಲ ಗ್ರಾಮದ ಮುರುವ ಕೊಮ್ಮುಂಜೆ ರಸ್ತೆಯಲ್ಲಿ ಸ್ವಚ್ಛತೆಯೇ ಸೇವೆ-2026 ಅಭಿಯಾನದಡಿ ಸ್ವಯಂಪ್ರೇರಿತ ಶ್ರಮದಾನ ನಡೆಯಿತು. ಈ ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಗಳು ಮತ್ತು ವಿವಿಧ ಒಕ್ಕೂಟದ ಸದಸ್ಯರು ಭಾಗವಹಿಸಿ ಮುರುವ ಬಸ್ ನಿಲ್ದಾಣದಿಂದ ಅಂಗನವಾಡಿ ವರೆಗಿನ ರಸ್ತೆಯನ್ನು ಸ್ವಚ್ಛಗೊಳಿಸಿದರು.